ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕನ್ನಡಿಗರ ಆಯ್ಕೆ
Posted date: 01 Thu, May 2014 – 08:12:21 AM

ದಕ್ಷಿಣಭಾರತ ಚಲನಚಿತ್ರ ವಾಣಿಜ್ಯ ಮಂಡಳಿ (೨೦೧೪-೧೫)ಪದಾಧಿಕಾರಿಗಳ ಪಟ್ಟಿಯಲ್ಲಿ ಈ ಬಾರಿ ನಮ್ಮ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯದ್ದೇ ಮೇಲಿಗೈ. ಇಂತಹದೊಂದು ಸಂಭ್ರಮದ ವಿಷಯವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹಿಂದಿನ ಅಧ್ಯಕ್ಷ, ಫ಼ಿಲಂ ಫ಼ೆಡರೇಶನ್ ಆಫ಼್ ಇಂಡಿಯ(ಎಫ಼್.ಎಫ಼್.ಐ)ಮುಂಬೈ ಉಪಾಧ್ಯಕ್ಷ ಹಾಗೂ ನಿರ್ಮಾಪಕ ಬಿ.ವಿಜಯಕುಮಾರ್ ವಿವರಿಸಿದರು.
   ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರಪ್ರದೇಶ ಈ ನಾಲ್ಕು ರಾಜ್ಯಗಳ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಕರ್ನಾಟಕದ ತಂಡಕ್ಕೆ ಬಹುಮತ ತಂದುಕೊಟ್ಟಿದ್ದಾರೆ. ಹೀಗಾಗಿ ದಕ್ಷಿಣಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾಗಿ ಬಿ.ವಿಜಯಕುಮಾರ್ ಆಯ್ಕೆಯಾಗಿದ್ದಾರೆ. ಸಾ.ರಾ.ಗೋವಿಂದು, ರಾಕ್‌ಲೈನ್ ವೆಂಕಟೇಶ್, ಎ.ಗಣೇಶ್ ನಿರ್ಮಾಪಕರ ಕಾರ್ಯಕಾರಿ ವಲಯಕ್ಕೆ, ಎಚ್.ಡಿ.ಗಂಗರಾಜು ವಿತರಕರ ಕಾರ್ಯಕಾರಿ ವಲಯಕ್ಕೆ ಮತ್ತು ಥಾಮಸ್ ಡಿಸೋಜ ಅವರು ಪ್ರದರ್ಶಕರ ಕಾರ್ಯಕಾರಿ ವಲಯಕ್ಕೆ ಬಹುಮತದಿಂದ ಚುನಾಯಿತರಾಗಿದ್ದಾರೆ.
   ದಕ್ಷಿಣಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಚುಕಾಣಿ ಹಿಡಿದ ಕರ್ನಾಟಕದ ಇವರೆಲ್ಲರು ಕನ್ನಡ ಹಾಗೂ ದಕ್ಷಿಣಭಾರತ ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೆಚ್ಚಿನ ಸೇವೆ ಸಲ್ಲಿಸುವ ಅಭಿಲಾಶೆ ಹೊಂದಿದ್ದಾರೆ.
  ಶ್ರೀಕಲ್ಯಾಣ್ ಹಾಗೂ ರವಿಕೊಟ್ಟಾರಕರ್ ಅವರ ನೇತೃತ್ವದಲ್ಲಿ ಈ ಚುನಾವಣೆ ಚೆನ್ನೈನಲ್ಲಿ ಇತ್ತೀಚೆಗೆ ನಡೆದು ಫಲಿತಾಂಶ ಪ್ರಕಟವಾಗಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed